Community News | eSamudaay
Logo
Home News Login/Join
Sign In as Creator!

Top News!

Register Today for seamless updates!
ಸವಾಲಿನ ವಿರುದ್ದವೇ ಕೆಲಸ ಮಾಡುವ ಛಾತಿ ಬೆಳೆಸಿಕೊಳ್ಳಬೇಕು: ಡಾ.ವಿಜಯಾ ಮನೆಯಂಗಳದಲ್ಲಿ ಕಾರ್ಯಕ್ರಮದಲ್ಲಿ ಡಾ.ವಿಜಯಾಗೆ ಕೆಯುಡಬ್ಲೂಜೆ ಗೌರವ
"ಸೋಲಿಗೆ ಅಂಜದಿರಿ, ಯಶಸ್ಸಿನತ್ತ ಮುನ್ನಡೆಯಿರಿ" ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 20ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ರಾಜ್ಯಪಾಲರ ಕರೆ
ಪಿಐಬಿ ಸತ್ಯಶೋಧನಾ ಘಟಕದ ಕಾರ್ಯವೈಖರಿ ಬಗ್ಗೆ ಜಿ. ಕುಮಾರ ನಾಯಕ ಕಳವಳ
ಭಕ್ತಾದಿಗಳ ಮನೆಬಾಗಿಲಿಗೆ ದೇವರ ಪ್ರಸಾದ ತಲುಪಿಸಲು ‘ಇ-ಪ್ರಸಾದ’ ಲೋಕಾರ್ಪಣೆ : ರಾಮಲಿಂಗಾರೆಡ್ಡಿ
ದೇಶದಲ್ಲಿ ಕೃಷಿ ನವೋದ್ಯಮ ಅನುಷ್ಠಾನದಲ್ಲಿ ಕರ್ನಾಟಕ ರಾಜ್ಯ ಎರಡನೇ ಸ್ಥಾನ - ನಾರಾಯಣ ಸುರೇಶ್

Community News

ಸವಾಲಿನ ವಿರುದ್ದವೇ ಕೆಲಸ ಮಾಡುವ ಛಾತಿ ಬೆಳೆಸಿಕೊಳ್ಳಬೇಕು: ಡಾ.ವಿಜಯಾ ಮನೆಯಂಗಳದಲ್ಲಿ ಕಾರ್ಯಕ್ರಮದಲ್ಲಿ ಡಾ.ವಿಜಯಾಗೆ ಕೆಯುಡಬ್ಲೂಜೆ ಗೌರವ
  ಬೆಂಗಳೂರು: ಸಾಧಿಸುವ ಛಲ, ವೃತ್ತಿ ಬದ್ಧತೆ ಇದ್ದರೆ ಪತ್ರಕರ್ತರಿಗೆ ವಯಸ್ಸು ಅಡ್ಡಿಯಾಗುವುದಿಲ್ಲ. ಸವಾಲಿನ ವಿರುದ್ದವೇ ಕೆಲಸ ಮಾಡುವ ವೃತ್ತಿ ಬದ್ಧತೆಯ ಛಾತಿ ರೂಢಿಸಿಕೊಳ್ಳಬೇಕು ಎಂದು ಹಿರಿಯ ಪತ್ರಕರ್ತೆ, ರಂಗಕರ್ಮಿ, ಸಾಹಿತಿ ಡಾ.ವಿಜಯಾ ಹೇಳಿದರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಮಹಿಳಾ ದಿನಾಚರಣೆ ಪ್ರಯುಕ್ತ ಮತ್ತು ವಿಶ್ವ ರಂಗಭೂಮಿ ದಿನಾಚರಣೆ ಸಂದರ್ಭದಲ್ಲಿ ಏರ್ಪಡಿಸಿದ್ದ ಮನೆಯಂಗಳದಲ್ಲಿ ಮನದುಂಬಿ ನಮನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಇತ್ತೀಚೆಗಿನ ದಿನಗಳಲ್ಲಿ ಪತ್ರಿಕಾ ವೃತ್ತಿಯಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿರುವುದು ನಿಜಕ್ಕೂ...
"ಸೋಲಿಗೆ ಅಂಜದಿರಿ, ಯಶಸ್ಸಿನತ್ತ ಮುನ್ನಡೆಯಿರಿ" ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 20ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ರಾಜ್ಯಪಾಲರ ಕರೆ
  ಮೈಸೂರು  : "ಹೋರಾಟಗಳು ಮತ್ತು ವೈಫಲ್ಯಗಳಿಂದ ನಾವು ಕಲಿಯಬೇಕು. ವಿದ್ಯಾರ್ಥಿಗಳೇ, ನಿಮ್ಮ ಕನಸುಗಳನ್ನು ಎಂದಿಗೂ ಬಿಟ್ಟುಕೊಡಬೇಡಿ, ತೊಂದರೆಗಳಿಗೆ ಹೆದರಬೇಡಿ ಮತ್ತು ಯಾವಾಗಲೂ ಹೊಸ ಸಾಧ್ಯತೆಗಳ ಹುಡುಕಾಟದಲ್ಲಿ ಮುಂದುವರಿಯಿರಿ" ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ  ಥಾವರ್ ಚಂದ್ ಗೆಹ್ಲೋಟ್ ಅವರು ಕರೆ ನೀಡಿದರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 20ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. "ಮಹಾನ್ ವಿಜ್ಞಾನಿ ಆಲ್ಬರ್ಟ್ ಐನ್‍ಸ್ಟೈನ್ ಹೇಳಿದಂತೆ "ಸೋಲು ಯಶಸ್ಸಿನ ಮೆಟ್ಟಿಲು". ನಮ್ಮ ಜೀವನದಲ್ಲಿ ಸೋಲು-ಗೆಲವು...
ಪಿಐಬಿ ಸತ್ಯಶೋಧನಾ ಘಟಕದ ಕಾರ್ಯವೈಖರಿ ಬಗ್ಗೆ ಜಿ. ಕುಮಾರ ನಾಯಕ ಕಳವಳ
  ಬೆಂಗಳೂರು : ಭಾರತ ಸರ್ಕಾರದ ಅಧೀನದಲ್ಲಿರುವ ಪಿಐಬಿಯ (Press Information Bureau) ಸತ್ಯಶೋಧನಾ ಘಟಕದ ಕಾರ್ಯವೈಖರಿಯ ಬಗ್ಗೆ ರಾಯಚೂರು-ಯಾದಗಿರಿ ಸಂಸದರಾದ ಜಿ. ಕುಮಾರ ನಾಯಕ ಅವರು ಸಂಸತ್‍ನಲ್ಲಿ ಇಂದು ಕಳವಳ ವ್ಯಕ್ತಪಡಿಸಿದರು. ಲೋಕಸಭೆಯಲ್ಲಿ ಮಾತನಾಡಿದ ಅವರು, ಸುಳ್ಳು ಸುದ್ದಿಗಳನ್ನು ಗುರುತಿಸಲು ಮತ್ತು ಪರಿಶೀಲಿಸಲು ಈ ಘಟಕ ಬಳಸುವ ಮಾನದಂಡಗಳು ಮತ್ತು ವಿಧಾನಗಳ ಕುರಿತು ಸ್ಪಷ್ಟತೆಯನ್ನು ಕೋರಿದರು. ಅಲ್ಲದೆ, ಈ ಘಟಕದ ಸತ್ಯ-ಶೋಧನಾ ಪ್ರಕ್ರಿಯೆಯು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳನ್ನು ತೆಗೆದುಹಾಕುವಲ್ಲಿ ಎಷ್ಟರಮಟ್ಟಿಗೆ...
ಭಕ್ತಾದಿಗಳ ಮನೆಬಾಗಿಲಿಗೆ ದೇವರ ಪ್ರಸಾದ ತಲುಪಿಸಲು ‘ಇ-ಪ್ರಸಾದ’ ಲೋಕಾರ್ಪಣೆ : ರಾಮಲಿಂಗಾರೆಡ್ಡಿ
  ಬೆಂಗಳೂರು : ಧಾರ್ಮಿಕ ದತ್ತಿ ಇಲಾಖೆಯ ಪ್ರಮುಖ  ದೇವಾಲಯಗಳಲ್ಲಿ ಭಕ್ತಾದಿಗಳಿಗೆ ವಿತರಿಸುವ ಪ್ರಸಾದವನ್ನು ಭಕ್ತಾದಿಗಳ ಮನೆ ಬಾಗಿಲಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ‘ಇ-ಪ್ರಸಾದ’ ಲೋಕಾರ್ಪಣೆ ಮಾಡಲಾಗಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆ ಮತ್ತು ಸಿ.ಎಸ್.ಇ ಆಡಳಿತ ಇವರ ಸಹಯೋಗದೊಂದಿಗೆ ಇಂದು ಬಿ.ಎಂ.ಟಿ.ಸಿ ಸಾರಿಗೆ ಆಯುಕ್ತರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ‘ಇ-ಪ್ರಸಾದ’ ಕಾರ್ಯಕ್ರಮದ ಉದ್ಘಾಟನೆ ಹಾಗೂ ವೆಬ್‍ಸೈಟ್‍ಗೆ ಚಾಲನೆ ನೀಡಿ ಮಾತನಾಡಿದರು. ಭಾರತ...
ದೇಶದಲ್ಲಿ ಕೃಷಿ ನವೋದ್ಯಮ ಅನುಷ್ಠಾನದಲ್ಲಿ ಕರ್ನಾಟಕ ರಾಜ್ಯ ಎರಡನೇ ಸ್ಥಾನ - ನಾರಾಯಣ ಸುರೇಶ್
  ಬೆಂಗಳೂರು: ಕರ್ನಾಟಕ ರಾಜ್ಯ ದೇಶದಲ್ಲೇ ಕೃಷಿ ನವೋದ್ಯಮ ಅನುಷ್ಠಾನದಲ್ಲಿ ಎರಡನೇ ಸ್ಥಾನದಲ್ಲಿದ್ದು ಶೇಕಡಾ 30 ರಷ್ಟು ಜೈವಿಕ ಆರ್ಥಿಕತೆಯನ್ನು ಒದಗಿಸುತ್ತಿದೆ ಎಂದು ಬೆಂಗಳೂರಿನ ಜೈವಿಕ ವಿಜ್ಞಾನ ನವೋದ್ಯಮಗಳ ಸಂಘದ ಮುಖ್ಯಸ್ಥರಾದ ನಾರಾಯಣ ಸುರೇಶ್ ತಿಳಿಸಿದರು. ಇಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಜಿಕೆವಿಕೆ ಆವರಣದಲ್ಲಿ ಆಯೋಜಿಸಿದ್ದ “ಭವಿಷ್ಯಕ್ಕಾಗಿ ಕೃಷಿ  ಉದ್ದಿಮೆಯಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತೆಯ” ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಪರಿಸ್ಥಿತಿಯಲ್ಲಿ ಹವಾಮಾನ ವೈಪರಿತ್ಯ ನಿರ್ವಹಣೆ ರೈತರಿಗೆ ಅತಿದೊಡ್ಡ ಸವಾಲಾಗಿ ಪರಿಣಮಿಸಿದೆ....
ವಿಶೇಷಚೇತನರಿಗೆ ಏಪ್ರಿಲ್ 3 ರಂದು ಉದ್ಯೋಗಮೇಳ
  ಬೆಂಗಳೂರು : ಭಾರತ ಸರ್ಕಾರದ ಕಾರ್ಮಿಕ ಇಲಾಖೆ ಮತ್ತು ಉದ್ಯೋಗ ಮಂತ್ರಾಲಯದಡಿ ಬರುವ ರಾಷ್ಟ್ರೀಯ ವೃತ್ತಿಸೇವಾ ಕೇಂದ್ರದ ವತಿಯಿಂದ ವಿಶೇಷಚೇತನರಿಗಾಗಿ 2025 ಏಪ್ರಿಲ್ 3 ರಂದು ಬೆಳಿಗ್ಗೆ 10.30 ಗಂಟೆಯಿಂದ ಮಧ್ಯಾಹ್ನ 3.00 ಗಂಟೆಯವರೆಗೆ ನಂ. ಎ-147, ಬಿ-1ನೇ ಮುಖ್ಯರಸ್ತೆ, ಮೊದಲನೇ ಹಂತ, ಪೀಣ್ಯ ಪೊಲೀಸ್ ಠಾಣೆ ಹಿಂಭಾಗ, ಪೀಣ್ಯ, ಬೆಂಗಳೂರು ಇಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಬೆಂಗಳೂರಿನ ಪಂಚತಾರಾ ಹೋಟೆಲ್‍ಗಳಲ್ಲಿ ಹೌಸ್ ಕೀಪಿಂಗ್, ರಿಸೆಪ್ಷನಿಸ್ಟ್ ಮುಂತಾದ ಕೆಲಸಗಳಿಗೆ ಮಹಿಳಾ  ಮತ್ತು ಪುರುಷ...
ಬೆಂಗಳೂರು ನಗರ ವಿಶ್ವವಿದ್ಯಾನಿಲಯ ಎನ್‍ಎಸ್‍ಎಸ್ ಪ್ರಶಸ್ತಿ ಪ್ರದಾನ ಸಮಾರಂಭ ರಾಷ್ಟ್ರೀಯ ಭಾವೈಕ್ಯತೆಗೆ ಎನ್‍ಎಸ್‍ಎಸ್ ಮಹತ್ತರ ಕೊಡುಗೆ-   ಪ್ರೊ. ಲಿಂಗರಾಜ ಗಾಂಧಿ
  ಬೆಂಗಳೂರು : ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣ ಹಾಗೂ ರಾಷ್ಟ್ರೀಯ ಭಾವೈಕ್ಯತೆ ಜಾಗೃತಿ ಕಾರ್ಯದಲ್ಲಿ ಎನ್‍ಎಸ್‍ಎಸ್ ಕೊಡುಗೆ ಅತ್ಯಂತ ಮಹತ್ವಪೂರ್ಣವಾಗಿದೆ ಎಂದು ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಕುಲಪತಿಗಳಾದ  ಪ್ರೊ,ಲಿಂಗರಾಜ ಗಾಂಧಿ ತಿಳಿಸಿದರು. ಅವರು ಸೆಂಟ್ರಲ್ ಕಾಲೇಜ್ ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ವಿಶ್ವವಿದ್ಯಾನಿಲಯ ಮಟ್ಟದ ಎನ್‍ಎಸ್‍ಎಸ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿವಿಧ ಪ್ರದೇಶ ಮತ್ತು ರಾಜ್ಯಗಳ ಭಾμÉ, ಸಾಹಿತ್ಯ, ಸಂಗೀತ. ಕಲೆ, ಸಂಸ್ಕøತಿಯ ಒಡನಾಟದ ಮೂಲಕ ರಾಷ್ಟ್ರೀಯ ಸೇವಾ ಯೋಜನೆ ಸಂಘಟನೆಯು...
ಕುಸಿದ ಟೊಮ್ಯಾಟೋ ಬೆಲೆ, ಸಂಕಷ್ಟಕ್ಕೆ ಸಿಲುಕಿದ ಬೆಳೆಗಾರರು
ಬೆಂಗಳೂರು- ನೆತ್ತಿ ಸುಡುವ ಬಿಸಿಲು, ವಿದ್ಯುತ್ ಕಣ್ಣಾಮುಚ್ಚಾಲೆ ನಡುವೆ ಸಾಲಸೋಲ ಮಾಡಿ ಕಷ್ಟಪಟ್ಟು ಬೆಳೆದ ಟೊಮ್ಯಾಟೋ ಬೆಲೆ ಪಾತಾಳ ತಲುಪಿದ್ದು, ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿನದಿದಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ನೀರಿನ ಅಭಾವದಿಂದ ಭಾರೀ ತೊಂದರೆಪಟ್ಟು ಬೆಳೆದಿದ್ದ ಟೊಮ್ಯಾಟೋ ಬೆಲೆಯಲ್ಲಿ ಭಾರೀ ಕುಸಿತವಾಗಿದ್ದು, ಇಟ್ಟ ಖರ್ಚು ಕೂಡ ಬಾರದೆ ತೋಟದಲ್ಲಿ ಬಿಟ್ಟಿದ್ದು, ಹಣ್ಣಾಗಿ ಜಮೀನಿನಲ್ಲಿ ಕೆಂಡದಂತೆ ಕಾಣುತ್ತಿವೆ.    ಲಾಟರಿ ಬೆಳೆ ಎಂದು ಕರೆಯಲಾಗಿರುವ ಟೊಮ್ಯಾಟೋ ಒಮ್ಮೊಮ್ಮೆ ಶತಕ...
ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯ ವರದಿ ಮುಖ್ಯಮಂತ್ರಿಗಳಿಗೆ ಸಲ್ಲಿಕೆ
    ಬೆಂಗಳೂರು: ದಲಿತ ಸಮುದಾಯಗಳಿಗೆ ಒಳ ಮೀಸಲಾತಿ ಕಲ್ಲಿಸುವ ಸಂಬಂಧ ರಚಿಸಲಾಗಿದ್ದ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯ ವರದಿಯನ್ನು ದಾಸ್ ಅವರು ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.  ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಸಚಿವರುಗಳಾದ ಕೆ.ಹೆಚ್.ಮುನಿಯಪ್ಪ, ಹೆಚ್.ಸಿ. ಮಹದೇವಪ್ಪ, ಆರ್.ಬಿ.ತಿಮ್ಮಾಪುರ್, ಮಾಜಿ ಸಚಿವ ಎಚ್. ಆಂಜನೇಯ, ಶಾಸಕ ಬಸಂತಪ್ಪ ಸೇರಿ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಎನ್‍ಆರ್‍ಐ ಫೋರಂ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಅವರನ್ನು ಭೇಟಿ ಮಾಡಿದ ಅಮೆರಿಕ ಅಧ್ಯಕ್ಷರ ಆಧ್ಯಾತ್ಮಿಕ ಸಲಹೆಗಾರರು
        ಬೆಂಗಳೂರು : ಅಮೆರಿಕ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರ ಆಧ್ಯಾತ್ಮಿಕ ಸಲಹೆಗಾರರಾದ ಜಾನ್ ಮಾರ್ಕ್ ಬರ್ನ್, ಮಾರ್ಕ್ ಬನ್ರ್ಸ್ ಕಚೇರಿಯ (ಯುಎಸ್‍ಎ) ಮುಖ್ಯಸ್ಥೆ ಶ್ರೀಮತಿ ಏಪ್ರಿಲ್ ಡೆನಿಸ್ ಫೆಲ್ಪ್ಸ್ ಮತ್ತು ಮಾರ್ಕ್ ಬನ್ರ್ಸ್ ಅವರ ಕಾರ್ಯದರ್ಶಿ ವೆರೋನಿಕಾ ಲಿನ್ ಓಶೀಲ್ಡ್ ಅವರು ಬೆಂಗಳೂರಿನಲ್ಲಿ ಕರ್ನಾಟಕ ಅನಿವಾಸಿ ಭಾರತೀಯ ವೇದಿಕೆಯ ಉಪಾಧ್ಯಕ್ಷರಾದ ಡಾ. ಆರತಿ ಕೃಷ್ಣ ಅವರನ್ನು ಇಂದು ಭೇಟಿ ಮಾಡಿ ಮಾತುಕತೆ ನಡೆಸಿದರು. ಆಧ್ಯಾತ್ಮಿಕ ಸಲಹೆಗಾರರೊಂದಿಗೆ ನಡೆದ ಈ ಭೇಟಿಯಲ್ಲಿ...
ಯುಗಾದಿ ಹಬ್ಬದ ಪ್ರಯುಕ್ತ ಕೆ.ಎಸ್.ಆರ್.ಟಿ.ಸಿ ಯಿಂದ 2000 ಹೆಚ್ಚುವರಿ ಬಸ್ಸುಗಳ ವಿಶೇಷ ಸಾರಿಗೆ ವ್ಯವಸ್ಥೆ
  ಬೆಂಗಳೂರು, : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು, ಮಾರ್ಚ್ 30 ರಂದು ಚಂದ್ರಮಾನ ಯುಗಾದಿ, ಮಾರ್ಚ್ 31 ರಂದು ರಂಜಾನ್ ಹಬ್ಬವಿರುವುದರಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ 2025 ಮಾರ್ಚ್ 28 ರಿಂದ  ಮಾರ್ಚ್ 30 ರವರೆಗೆ ಬೆಂಗಳೂರಿನಿಂದ ವಿವಿಧ ಸ್ಥಳಗಳಿಗೆ 2000 ಹೆಚ್ಚುವರಿ ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಿದೆ. ರಾಜ್ಯದ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಮಾರ್ಚ್ 31 ರಂದು ವಿಶೇಷ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುವುದು. ಕೆಂಪೇಗೌಡ ಬಸ್ ನಿಲ್ದಾಣದಿಂದ...
ಪರಿಸರಕ್ಕೆ ಹಾನಿ ಮಾಡುವ ಜನರಿಗೆ ಕರುಣೆ ಬೇಡ
ನವದೆಹಲಿ : ಹೆಚ್ಚಿನ ಸಂಖ್ಯೆಯ ಮರಗಳನ್ನು ಕಡಿಯುವ ಕೃತ್ಯ ಮನುಷ್ಯನನ್ನು ಕೊಲ್ಲುವುದಕ್ಕಿಂತ ಕೆಟ್ಟದಾಗಿದೆ. ಈ ಹಿನ್ನೆಲೆಯಲ್ಲಿಪರಿಸರಕ್ಕೆ ಹಾನಿ ಮಾಡುವ ಜನರಿಗೆ ಕರುಣೆ ತೋರಿಸಬಾರದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಅಕ್ರಮವಾಗಿ ಕಡಿಯುವ ಪ್ರತಿಯೊಂದು ಮರಕ್ಕೆ ೧ ಲಕ್ಷ ರೂ. ದಂಡ ವಿಧಿಸಲು ಸಂಬಂಧಿಸಿದ ಇಲಾಖೆ, ಸಚಿವಾಲಯ ಮತ್ತು ಪ್ರಾಧಿಕಾರಗಳಿಗೆ ಸುಪ್ರೀಂಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದೆ ಸಂಬಂಧಿತ ಪ್ರಾಧಿಕಾರದ ಅನುಮೋದನೆಯಿಲ್ಲದೆ ಅಕ್ರಮವಾಗಿ ಮರಗಳನ್ನು ಕಡಿಯುವ ಮತ್ತು ಪರಿಸರಕ್ಕೆ ಹಾನಿ ಮಾಡುವವರನ್ನು ಕಬ್ಬಿಣದ ಕೈಯಿಂದ ಎದುರಿಸಬೇಕು ಎಂಬ...
ಶಿವಮೊಗ್ಗ, ಕೊಡಗು ಸೇರಿ ಕರ್ನಾಟಕದ 11 ಜಿಲ್ಲೆಗಳಲ್ಲಿ ಇಂದು ಮಳೆ
ಕರ್ನಾಟಕದ ಹಲವೆಡೆ ಇಂದು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಹಾವೇರಿ, ಗದಗ, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಬಾಗಲಕೋಟೆ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ. ಬೆಂಗಳೂರು : ಕರ್ನಾಟಕದ...
ನಾಳೆಯಿಂದ ಬೆಂಗಳೂರಿಗರಿಗೆ ಕಸ ಸಂಕಷ್ಟ..!
ಬೆಂಗಳೂರು,ಮಾ.25- ಗಾರ್ಡನ್‌ ಸಿಟಿಗೆ ಮತ್ತೆ ಗಾರ್ಬೇಜ್‌ ಸಂಕಷ್ಟ ಎದುರಾಗುವ ಸಾಧ್ಯತೆಗಳಿವೆ.ತಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಳೆಯಿಂದ ಕಸ ಸಾಗಿಸೋ ವಾಹನಗಳ ಚಾಲಕರು ಆಮರಣಾಂತ ಉಪವಾಸ ಕೈಗೊಳ್ಳುವ ಸಾಧ್ಯತೆ ಇರುವುದರಿಂದ ಸಿಲಿಕಾನ್‌ ಸಿಟಿ ಮತ್ತೆ ಗಾರ್ಬೇಜ್‌ ಸಿಟಿಯಾಗುವುದು ಗ್ಯಾರಂಟಿಯಾಗಿದೆ. ಕಸ ಸಂಗ್ರಹ ಆಟೋಗಳು, ಲಾರಿಗಳ ಸಂಚಾರ ಬಂದ್‌ ಮಾಡಲು ವಿವಿಧ ಸಂಘಟನೆಗಳ ಜೊತೆ ಸೇರಿ ಪ್ರತಿಭಟನೆಗೆ ವಾಹನ ಚಾಲಕರು ಪ್ಲಾನ್‌ ಮಾಡಿದ್ದಾರೆ.ನಾಳೆಯಿಂದ 4 ಸಾವಿರ ಕಸದ ಆಟೋಗಳು. 700 ಕಸದ ಲಾರಿಗಳು....
ಕರ್ನಾಟಕದಲ್ಲಿ ಪ್ರಥಮ ತರಗತಿ ಪ್ರವೇಶದ ಹೊಸ ನಿಯಮ: ಪೋಷಕರ ಆತಂಕ ಮತ್ತು ಸರ್ಕಾರದ ಸ್ಪಂದನೆ
ಬೆಂಗಳೂರು: ಕರ್ನಾಟಕದಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದ ಹೊಸ ವಯೋಮಿತಿ ನಿಯಮವು ಸಾವಿರಾರು ಪೋಷಕರ ಆತಂಕಕ್ಕೆ ಕಾರಣವಾಗಿದೆ. ಪ್ರಥಮ ತರಗತಿಗೆ ಪ್ರವೇಶ ಪಡೆಯಲು ಮಕ್ಕಳಿಗೆ ಕನಿಷ್ಠ ಆರು ವರ್ಷ ವಯಸ್ಸು ಪೂರ್ಣವಾಗಿರಬೇಕು ಎಂಬ ನಿಯಮವನ್ನು ಈ ವರ್ಷದಿಂದ ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದೆ. ಈ ನಿರ್ಧಾರವು ಸಾವಿರಾರು ಮಕ್ಕಳನ್ನು ಮತ್ತು ಅವರ ಪೋಷಕರನ್ನು ಸಂಕಟಕ್ಕೀಡುಮಾಡಿದೆ. ಪೋಷಕರ ಅಸಮಾಧಾನ: ಈ ಹೊಸ ನಿಯಮದಿಂದ ರಾಜ್ಯದ ಸುಮಾರು 5 ಲಕ್ಷ ಮಕ್ಕಳಿಗೆ ಪರಿಣಾಮ ಬೀರುತ್ತದೆ. ಈ ನಿಯಮ ಅಲ್ಪ...
ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಪದವೀಧರರು ಗ್ರಾಮೀಣ ಅಭಿವೃದ್ಧಿಯಲ್ಲಿ ಭಾಗವಹಿಸಲು ಸಚಿವರ ಮನವಿ
  ಹಾಲಿ ಜನ್ಯ ರೋಗಗಳಿಂದ ರೈತರಿಗೆ ಉಂಟಾಗುವ ನಷ್ಟದ ಬಗ್ಗೆ ಉಲ್ಲೇಖಿಸಿ, ಸಚಿವರು ಪದವೀಧರರನ್ನು ರೈತರು ಮತ್ತು ಸರ್ಕಾರಕ್ಕೆ ಸಹಾಯ ಮಾಡಲು ಕರೆ ನೀಡಿದರು   ಬೀದರ್:  ಬೀದರ್‌ನಲ್ಲಿ ನಡೆದ ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವದಲ್ಲಿ ಪದವೀಧರರು ಪ್ರಮಾಣ ವಚನ ಸ್ವೀಕರಿಸಿದರು. ಪಶುಪಾಲನಾ ಮತ್ತು ರೇಷ್ಮೆ ಉತ್ಪಾದನಾ ಸಚಿವ ಕೆ. ವೆಂಕಟೇಶ್ ಅವರು ಪಶುಪಾಲನೆ ಮತ್ತು ಮೀನುಗಾರಿಕಾ ವಿಜ್ಞಾನದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳನ್ನು ಭಾರತದಲ್ಲಿನ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಲ್ಲಿ...
ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌: ಅರ್ಜಿಗೆ ದಿನಾಂಕ ವಿಸ್ತರಣೆ
ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಅಡಿಯಲ್ಲಿನ 2024-25ನೇ ಸಾಲಿನ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ ಸಂಬಂಧ, ಶಿಕ್ಷಣ ಕ್ಷೇತ್ರದಲ್ಲೂ ಹಾಗೂ ಉದ್ಯೋಗ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಅವುಗಳ ಪೈಕಿ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಣೆ, ವಿದೇಶ ವ್ಯಾಸಂಗಕ್ಕೆ ಸಹಾಯಧನ ಪ್ರಮುಖವಾದವುಗಳಾಗಿವೆ. ಈ ಕೆಳಗಿನ ಎಲ್ಲ ಕಾರ್ಯಕ್ರಮಗಳು / ಸೌಲಭ್ಯಗಳಿಗೆ ನೀವು ಅರ್ಹರಾಗಿದ್ದಲ್ಲಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ ಮಾಡಲಾಗಿದ್ದು, ಮಾರ್ಚ್ 29 ರವರೆಗೆ ಅವಕಾಶ...
ಯೋಗ ಕೇವಲ ಆಸನವಲ್ಲ, ಮಾನಸಿಕ ಸ್ಥಿಮಿತ ಕೂಡ ಯೋಗ : ಬಿಹಾರ ಸ್ಕೂಲ್ ಆಫ್ ಯೋಗ ವಿಶ್ವ ಪೀಠದ ನಿರಂಜನಾನಂದ ಸರಸ್ವತಿ ಸ್ವಾಮೀಜಿ
  ಬೆಂಗಳೂರು ; ಯೋಗ ಎಂದರೆ ಕೇವಲ ಆಸನವಲ್ಲ. ದಿನದ 24 ಗಂಟೆ, ವರ್ಷದ 365 ದಿನಗಳ ಕಾಲ ಮನಸನ್ನು ಸಂಯಮದಲ್ಲಿಟ್ಟುಕೊಳ್ಳುವುದು ಕೂಡ ಯೋಗ ಎಂದು ಬಿಹಾರ ಸ್ಕೂಲ್ ಆಫ್ ಯೋಗ ವಿಶ್ವ ಪೀಠದ ನಿರಂಜನಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ.ವೇದಾಂತ ಭಾರತಿ ಮತ್ತು ರಾಮಕೃಷ್ಣ ಮಠದಿಂದ ಬೆಂಗಳೂರಿನ ಬಸವನಗುಡಿಯ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಶತಮಾನೋತ್ಸವ ಸಭಾಂಗಣದಲ್ಲಿ “ಭಾರತೀಯ ಸಂಸ್ಕೃತಿ ಬಗ್ಗೆ ಆದಿ ಶಂಕರಾಚಾರ್ಯರ ಬೋಧನೆಗಳ ಪರಿಣಾಮ” ಕುರಿತು ಭಕ್ತ ವೃಂದಕ್ಕೆ...
ನೆಕ್ಸಸ್ ಎಡ್ಜ್-2025ರ ವಿಚಾರಗೋಷ್ಠಿ
  ಬೆಂಗಳೂರು : ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ‘ಬಿಸಿಯು ಸ್ಕೂಲ್ ಆಫ್ ಮ್ಯಾನೇಜ್ ಮೆಂಟ್ ಸ್ಟಡೀಸ್' ಮತ್ತು 'ಇಂಟರ್ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಬ್ಯುಸಿನೆಸ್ ಸ್ಟಡೀಸ್ ಸಂಯುಕ್ತ ಆಶ್ರಯದಲ್ಲಿ ಮಾರ್ಚ್ 25 ರಂದು ಬೆಳಿಗ್ಗೆ 10 ಗಂಟೆಯಿಂದ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಒಂದು ದಿನದ ವಿಚಾರ ಗೋಷ್ಠಿಯನ್ನು ಏರ್ಪಡಿಸಲಾಗಿದೆ. ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪೆÇ್ರ.ಲಿಂಗರಾಜ ಗಾಂಧಿ ಉದ್ಘಾಟನಾ ಅಧಿವೇಶನದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಇನ್ಫೋಸಿಸ್ ಸಹ ಉಪಾಧ್ಯಕ್ಷರಾದ ವಿಕ್ಟರ್ ಸುಂದರರಾಜ್...
ಮಾರ್ಚ್ 27 ರಂದು ಚಿತ್ರದುರ್ಗ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಸಿಟ್ಟಿಂಗ್ಸ್
  ಬೆಂಗಳೂರು : ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳಲ್ಲಿ ನೊಂದವರಿಗೆ ಸೂಕ್ತ ನೆರವನ್ನು ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗವು ಮಾರ್ಚ್ 27 ರಂದು ಚಿತ್ರದುರ್ಗ ಜಿಲ್ಲೆಯಲ್ಲಿ ಸಿಟ್ಟಿಂಗ್ಸ್ ನಡೆಸಲಿದೆ. ಚಿತ್ರದುರ್ಗ ಜಿಲ್ಲೆಗೆ ಸಂಬಂಧಿಸಿದಂತೆ ಆಯೋಗದಲ್ಲಿ ನೋಂದಣಿಯಾಗಿರುವ ಪ್ರಕರಣಗಳನ್ನು ಇತ್ಯರ್ಥಪಡಿಸಿ, ವಿಲೇ ಮಾಡಿ ಕ್ರಮ ಜರುಗಿಸಲು ಉದ್ದೇಶಿಸಲಾಗಿದೆ. ದೂರುದಾರರು ಹಾಗೂ ಪ್ರತಿವಾದಿ ಪ್ರಾಧಿಕಾರಗಳು ಈ ಸೌಲಭ್ಯದ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ. ಮಾನವ ಹಕ್ಕು ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಚಿತ್ರದುರ್ಗ...